..WELCOME....................**** ಸುಸ್ವಾಗತ *****...................WELCOME..

Hai..... **** WELCOME TO NEWS KANNADA WEBSITE ****

Wednesday, March 30, 2011

ICC Cricket World Cup 2011, 2nd Semi-Final Pakistan vs India Live Cricket Streaming. Match scheduled to played at Punjab Cricket Association Stadium Mohali, Chandigarh on 30 March 2011.

***ಎರಡನೇ ಸೆಮಿಫೈನಲ್ ಭಾರತ- ಪಾಕಿಸ್ತಾನ:

ಸ್ಥಳ: ಪಂಜಾಬ್ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣ, ಮೊಹಾಲಿ
ಆರಂಭ: ಮಧ್ಯಾಹ್ನ 2.30ಕ್ಕೆ
ನೇರ ಪ್ರಸಾರ: ಇಎಸ್‌ಪಿಎನ್, ಸ್ಟಾರ್ ಸ್ಪೋರ್ಟ್ಸ್



ದ್ವಿತೀಯ ಸೆಮಿಫೈನಲ್ ಸೆಣಸಾಟ  
ಭಾರತ
ಮಹೇಂದ್ರ ಸಿಂಗ್ ದೋನಿ(ನಾಯಕ)
ವೀರೇಂದ್ರ ಸೆಹ್ವಾಗ್
ಸಚಿನ್ ತೆಂಡೂಲ್ಕರ್
ಗೌತಮ್ ಗಂಭೀರ್
ವಿರಾಟ್ ಕೊಹ್ಲಿ
ಯುವರಾಜ್ ಸಿಂಗ್
ಸುರೇಶ್ ರೈನಾ
ಹರಭಜನ್ ಸಿಂಗ್
ಜಹೀರ್ ಖಾನ್
ಮುನಾಫ್ ಪಟೇಲ್
ಆರ್. ಅಶ್ವಿನ್
ಯೂಸುಫ್ ಪಠಾಣ್
ಪಿಯೂಶ್ ಚಾವ್ಲಾ
ಆಶಿಶ್ ನೆಹ್ರಾ
ಎಸ್. ಶ್ರೀಶಾಂತ್
ಕೋಚ್: ಗ್ಯಾರಿ ಕರ್ಸ್ಟನ್

ಪಾಕಿಸ್ತಾನ

ಶಾಹಿದ್ ಅಫ್ರಿದಿ (ನಾಯಕ)
ಕಮ್ರಾನ್ ಅಕ್ಮಲ್
ಅಹ್ಮದ್ ಶಹಜಾದ್
ಯೂನುಸ್ ಖಾನ್
ಮಿಸ್ಬಾ-ಉಲ್-ಹಕ್
ಉಮರ್ ಅಕ್ಮಲ್
ಅಬ್ದುಲ್ ರಜಾಕ್
ಅಬ್ದುರ್ ರಹಮಾನ್
ಮಹಮ್ಮದ್ ಹಫೀಜ್
ಸಯೀದ್ ಅಜ್ಮಲ್
ಉಮರ್ ಗುಲ್
ವಹಾಬ್ ರಿಯಾಜ್
ಶೋಯೆಬ್ ಅಖ್ತರ್
ಸೊಹೇಲ್ ತನ್ವೀರ್
ಅಸಾದ್ ಶಫಿಕ್
ಕೋಚ್: ವಕಾರ್ ಯೂನಿಸ್

ಅಂಪೈರ್‌ಗಳು: ಸೈಮನ್ ಟೌಫೆಲ್ ಹಾಗೂ ಇಯಾನ್ ಗೌಲ್ಡ್
ಮೂರನೇ ಅಂಪೈರ್: ಬಿಲ್ಲಿ ಬೌಡೆನ್
ಪಂದ್ಯದ ರೆಫರಿ: ರಂಜನ್ ಮಡುಗಲ್

ಪಂದ್ಯದ ವೇಳೆ: ಮ. 2.30ರಿಂದ ಸಂ. 6.00 ಮತ್ತು 6.40ರಿಂದ...
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಸ್ಟಾರ್ ಕ್ರಿಕೆಟ್ ಮತ್ತು  ಡಿಡಿ

Pakistan vs India Live Cricket

ICC Cricket World Cup 2011, 2nd Semi-Final Pakistan vs India Live Cricket Streaming. Match scheduled to played at Punjab Cricket Association Stadium Mohali, Chandigarh on 30 March 2011.


ICC Cricket World Cup Live Cricket Video
For High Quality Stream Click Here
 






WORLD CUP 2011 INDIA V/S PAKISTAN SEMIFINAL MATCH AT MOHALI

ಮೊಹಾಲಿ ಕ್ರೀಡಾಂಗಣದಲ್ಲಿ ಭಾರತ ತಂಡದವರು ಮಂಗಳವಾರ ಅಭ್ಯಾಸ ನಡೆಸುವಾಗ ಸಚಿನ್ ಅಭಿಮಾನಿ ಸುಧೀರ್ ರಾಷ್ಟ್ರಧ್ವಜಹಿಡಿದು ಆಟಗಾರರಿಗೆ ಸ್ಫೂರ್ತಿ ನೀಡಿದರು. ಭಾರತ ತಂಡ ಆಡುವಾಗಲೆಲ್ಲಾ ಅಲ್ಲಿ ಸುಧೀರ್ ಉಪಸ್ಥಿತಿ ಇರುತ್ತದೆ. ವಿಶೇಷವೆಂದರೆ ಅಭ್ಯಾಸ ಮುಗಿಯುವವರೆಗೆ ಇವರು ರಾಷ್ಟ್ರಧ್ವಜ ಹಿಡಿದೇ ನಿಂತಿರುತ್ತಾರೆ.               -ಎಎಫ್‌ಪಿ ಚಿತ್ರ. 

 
ಇಂದು ಭಾರತ-ಪಾಕ್ ಪಂದ್ಯ: ಕುತೂಹಲ ಕೋಟಿ ಕೋಟಿ
ಭಾರತ-ಪಾಕಿಸ್ತಾನ ಪ್ರಧಾನಮಂತ್ರಿಗಳ ರಾಯಭಾರ ಹಾಗೂ ಮಹಾಸಮರವೆಂಬ ಸಮೂಹಸನ್ನಿಯ ನಡುವೆ ಕ್ರಿಕೆಟ್ ಗೆಲ್ಲಲಿ ಎಂಬ ಭಾವನೆಯೊಂದಿಗೆ ಮಹೇಂದ್ರಸಿಂಗ್ ದೋನಿ ಮತ್ತು ಶಾಹಿದ್ ಅಫ್ರಿದಿ ಮೈದಾನಕ್ಕಿಳಿಯಲಿದ್ದಾರೆ.  
ಭಾರತ ಹಾಗೂ ಪಾಕಿಸ್ತಾನ ನಡುವೆ ಹತ್ತನೇ ವಿಶ್ವ ಕಪ್ ಕ್ರಿಕೆಟ್ ಸೆಮಿಫೈನಲ್ ಪಂದ್ಯ, ಮೊಹಾಲಿಯ ಪಂಜಾಬ್ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಬುಧವಾರ ಮಧ್ಯಾಹ್ನ ನಡೆಯಲಿದೆ. ಎರಡೂ ದೇಶಗಳಲ್ಲಿ ಹಬ್ಬಿರುವ ಕ್ರಿಕೆಟ್ ಹುಚ್ಚು ಆಟಕ್ಕೆ ಕಿಚ್ಚು ಹಚ್ಚಲಿದೆ. ಭಾರತವೇ ಗೆಲ್ಲುವುದು ಎಂಬ ಕೂಗು ವಾಘಾ ಗಡಿಯಾಚೆ ಪಾಕಿಸ್ತಾನಿಗಳ ಕಿವಿಗಪ್ಪಳಿಸಲಿದೆ.

‘ಕ್ರಿಕೆಟ್ ಎರಡೂ ರಾಷ್ಟ್ರಗಳನ್ನು ಹತ್ತಿರ ತರಲಿ’ ಎಂಬ ಸದ್ಭಾವನೆಯನ್ನು ಇಬ್ಬರೂ ಪ್ರಧಾನಿಗಳು ಹಾಗೂ ತಂಡಗಳ ನಾಯಕರು ವ್ಯಕ್ತಪಡಿಸಿರುವರಾದರೂ, ಮೈದಾನದಲ್ಲಿ ತೀವ್ರ ಸೆಣಸಾಟ ಕಂಡುಬರುವುದಂತೂ ಖಂಡಿತ. ತಮ್ಮ ತಂಡವೇ ಗೆಲ್ಲಬೇಕೆಂಬ ನಿರೀಕ್ಷೆ ಎರಡೂ ರಾಷ್ಟ್ರಗಳಲ್ಲಿರುವುದು ಸಹಜವೇ ಆದರೂ, ಅದರ ಹಿಂದಿರುವ ಭಾವನೆಗಳು ಆಟಗಾರರ ಮೇಲೆ ಒತ್ತಡ ಹೇರಲಿವೆ.