..WELCOME....................**** ಸುಸ್ವಾಗತ *****...................WELCOME..

Hai..... **** WELCOME TO NEWS KANNADA WEBSITE ****

Friday, April 2, 2010

ಎಸ್ ಬಿ ಐ ಖಾತೆ ದುಡ್ಡಿಗೆ ಇನ್ನು ಪ್ರತಿದಿನದ ಬಡ್ಡಿ

       ಏಪ್ರೀಲ್ 1 ರಿಂದ ನೀವು ಬ್ಯಾಂಕನ ಉಳಿತಾಯ ಖಾತೆಯಲ್ಲಿ (ಸೆವಿಂಗ್ಸ್ ಅಕೌಂಟ್ -ಎಸ್ ಬಿ) ಸಾಕಷ್ಟು ಹಣ ಇಟ್ಟಿದ್ದೀರಾ? ಹಾಗಿದ್ದರೆ ಇಲ್ಲೊಂದು ಸಿಹಿ ಸುದ್ದಿ ಇದೆ! ಏಪ್ರಿಲ್ 1 ರಿಂದ ಎಸ್ ಬಿ ಖಾತೆಯಲ್ಲಿರುವ ಹಣಕ್ಕೆ ದಿನದ ಆಧಾರದ ಮೇಲೆ ಬಡ್ಡಿ ನೀಡಲಾಗುತ್ತದೆ.
  ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿ ಐ) ದಿನದ ಆಧಾರದ ಮೇಲೆ ಬಡ್ಡಿ ಲೆಕ್ಕ ಹಾಕುವಂತೆ ನಿರ್ದೇಶನ ನೀಡಿದ್ದು, ಇದು ಏಪ್ರಿಲ್ 1 ರಿಂದಲೇ ಜಾರಿಯಾಗಿರುತ್ತದೆ. 

         ಅನುಕೊಲ ಏನು?
  • ನಿಮ್ಮ ಖಾತೆಯಲ್ಲಿರುವಷ್ಟು ಹಣಕ್ಕೆ ಶೇ.3.5ರಷ್ಟು ಬಡ್ಡಿ ಬರಲಿದೆ.
  • ಉಳಿತಾಯ ಖಾತೆಯಲ್ಲಿ ಹೆಚ್ಚು ಹಣ ಇಟ್ಟು ವ್ಯವಹರಿಸುವವರಿಗೂ ಅನುಕೊಲ.
  •  ಉಳಿತಾಯ ಖಾತೆಯಲ್ಲಿ ಹಣ ಇದ್ದಷ್ಟು ಲಾಭ.

ಸ್ಚಾಮೀಜಿಯವರು ಮದರ್ ತೆರೇಸಾ : ದೇ. ಜವರೇಗೌಡ

ಸಿದ್ದಗಂಗಾ ಶ್ರೀಗಳು ಸಮಾಜಕ್ಕೆ ಸಲ್ಲಿಸುತ್ತಿರುವ ಸೇವೆ ಅಪೂರ್ವವಾಗಿದ್ದು ಆವರ ಸೇವೆಯನ್ನು ಮದರ್ ತೆರೇಸಾ ಅವರಿಗೆ ಹೋಲಿಸಬಹುದಾಗಿದೆ ಎಂದು ನಾಡೋಜ ಹಾಗೊ ಸಾಹಿತಿ ದೇ। ಜವರೇಗೌಡ ಬಣ್ಣಿಸಿದರು। ಅವರು ಇಲ್ಲಿನ ಸಿದ್ದಗಂಗಾ ಮಠದಲ್ಲಿ ಏರ್ಪಾಟಾಗಿದ್ದ ಸಿದ್ದಗಂಗಾ ಶ್ರೀಗಳಿಗೆ ಬಸವ ಪುರಸ್ಕಾರ ನೀಡಿದ ಸಮಾರಂಭದಲ್ಲಿ ಅಭಿನಂದನಾ ನುಡಿಗಳನ್ನಾಡಿದರು.